00:00
02:52
ಈ ಹಾಡಿನ ಬಗ್ಗೆ ಸಂಬಂಧಿಸಿದ ಮಾಹಿತಿಯು ಪ್ರಸ್ತುತ ಲಭ್ಯವಿಲ್ಲ.
ಹೃದಯದ ಪಾಡು
ಹೃದಯವೇ ನೋಡು
ಸನಿಹಕೆ ಬರಲೂ ಅನುಮತಿ ನೀಡು
ಪರವಶ ಮನ ಹೊಸಬೆಳಕಿನ ಕನಸು ಕಾಣುತ
ಇಡೀ ಬದುಕಿದು ಹಿಡಿ ಒಲವಿಗೆ ಸೀಮಿತ
ಕ್ಷಣ ಪ್ರತಿಕ್ಷಣ ತವಕದ ಗುಣ
ಎಂಥ ಅಧ್ಭುತ
ಕಣ ಕಣದಲೂ ನಿನದೇ ಸೆಳೆತ
ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರಿನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರಿನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
♪
ಅರಳೋ ಮುಂಜಾನೆಯ ಮೊದಲ ಕಿರಣ
ನಿನಗೇ ಸರಿದೂಗುವ ಹೋಲಿಕೆ
ಸಂಜೆ ಮುಸ್ಸಂಜೆಗೆ ಬಣ್ಣದ ಸಾಲ
ಕೊಡುವ ಗುಣವಂತಿಕೆ ಏತಕೆ
ಈ ಒಲವಿದು ಹೀಗೇಕೆ?
ಕನಸಿನ ಹೊಳೆ ಗುಂಗಿನ ಮಳೆ ಪ್ರಾಣ ಹಿಂಡಿದೆ
ನಿನ ನೆನೆಯುತ ಕೆಲಸವೆ ದಿನ ಸಾಗಿದೆ
ಕನವರಿಕೆಗೆ ಮನವರಿಕೆಯ ಮಾಡಲಾಗದೆ
ನಮಿಸುತ ಮನ ದಣಿದು ಹೋಗಿದೆ
ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರಿನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರಿನಲ್ಲೂ
ನಿನ್ನ ಹೆಸರ ಜಪಿಸೋ ಹಾಡು